¡Sorpréndeme!

16-10-2018: ಮಂಗಳವಾರದ ದಿನ ಭವಿಷ್ಯ ವಿಡಿಯೋ | Boldsky kannada

2018-10-15 45 Dailymotion

ಮರದ ಮೇಲೆ ಕುಳಿತ ಹಕ್ಕಿಗೆ ಕೊಂಬೆ ಮುರಿದು ಬೀಳಬಹುದು ಎನ್ನುವ ಭಯ ಇರುವುದಿಲ್ಲ. ಏಕೆಂದರೆ ಹಕ್ಕಿಗಳು ತಮ್ಮ ರೆಕ್ಕೆಯನ್ನು ನಂಬಿರುತ್ತವೆಯೇ ಹೊರತು ಕೊಂಬೆಗಳನ್ನಲ್ಲಾ. ನಾವು ಸಹ ಹಕ್ಕಿಯಂತೆ ನಮ್ಮ ಬಲದ ಬಗ್ಗೆ ಆತ್ಮ ವಿಶ್ವಾಸ ಹೊಂದಿರಬೇಕು. ಅದೃಷ್ಟ ಬರುವುದು ಎಂದು ಕೈ ಕಟ್ಟಿ ಕುಳಿತುಕೊಳ್ಳುವುದು, ಯಾರಾದರೂ ನಮ್ಮನ್ನು ಮೋಸ ಮಾಡಬಹುದು ಎನ್ನುವ ಭಯಕ್ಕೆ ಒಳಗಾಗಿರುವುದು ಅಥವಾ ನಮ್ಮನ್ನು ಯಾರಾದರೂ ಮೇಲೆತ್ತಬಹುದು ಎನ್ನುವ ಆಸೆಯಲ್ಲಿ ಮುಳುಗಿರಬಾರದು. ನಮ್ಮ ಸಾಮರ್ಥ್ಯದಲ್ಲಿ ಸದಾ ಭರವಸೆಯನ್ನು ಇಟ್ಟುಕೊಳ್ಳಬೇಕು. ಮಾಡಬೇಕು ಎಂದು ಕೊಂಡ ಕೆಲಸಕ್ಕೆ ನಿರಂತರ ಶ್ರಮವನ್ನು ವಹಿಸಬೇಕು. ಆಗಲೇ ಯಶಸ್ಸು ಹಾಗೂ ಸಂತೋಷ ನಮ್ಮ ಜೀವನದಲ್ಲಿ ತುಂಬಿರುತ್ತದೆ. ಮಂಗಳವಾರವಾದ ಈ ಶುಭ ದಿನ ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆಯನ್ನು ತರುವುದು ಎಂಬ ನಂಬಿಕೆಯನ್ನು ಹೊತ್ತು, ದಿನವನ್ನು ಪ್ರಾರಂಭಿಸಿ. ಈ ದಿನದ ನಿಮ್ಮ ಭವಿಷ್ಯದ ಬದಲಾವಣೆ ಅರಿಯಲು ಇಲ್ಲಿ ನೀಡಿರುವ ವಿಡಿಯೋ ನೋಡಿ